Tuesday, October 9, 2012

ನೀವೂ ಗಡ್ಡಕ್ಕೆ ಬೆಂಕಿ ಹತ್ತಿದ್ರೆನೇ ಭಾವಿ ತೋಡ್ತಿರಾ ?


ಕನ್ನಡದಲ್ಲಿ ಪ್ರಥಮ ಬಾರಿಗೆ ಬ್ಲಾಗ್ ಮಾಡುವ ಕಾರಣ ಏಕೋ ಚೂರು ಜರಿಕೆ.ಇಂಗ್ಲಿಷ್ನಲ್ಲಿ ಬರೆಯುವರ ಸಂಖ್ಯೆ ಜಾಸ್ತಿ , ಕನ್ನಡದಲ್ಲಿ   ಬರೆಯುವರು ಕಮ್ಮಿ ಎಂದು ಹತ್ತುಹಲವರು ಹೇಳಿದರು ಸಹ ಎಚ್ಚೆತ್ತುಕೊಳ್ಳದ ನನ್ನ ಕನ್ನಡಾಭಿಮಾನ ಈ ರೀತಿ ಥಟ್ ಅಂತಾ ಎಚ್ಚೆತ್ತುಕೊಳ್ಳಲು ಕರಣ  ಕುಳಿತು ಆಲೋಚಿಸಿದೆ.

ಉತ್ತರಾ ಏನೋ ಸಿಕ್ತು ಆದರೆ ಜೊತೆಗೆ ನನ್ನಲ್ಲಿನ ಒಂದು ಲೋಪದೋಶವು ಸಹ ಎದ್ದು ಕಂಡಿತು.
ಕನ್ನಡ ನಶಿಸಿಹೋಗುವುದರ ಬಗ್ಗೆ ಹಾಗೆ ಸುಮ್ಮನೆ ಮಾತಾಡುತ್ತಿರುವಾಗ , ಆಂಗ್ಲ ಮಾಧ್ಯಮದಲ್ಲಿ ಓದಿರುವವರ ಬಗ್ಗೆ ಸ್ನೇಹಿತರೋಬರು ಒಂದು strong doseನೆ ಕೊಟ್ರು.ಎಲ್ಲೋ ಕುಂಬಕರ್ಣನಂತೆ ಗೊರಕೆ ಹೊಡೀತಿದ್ದ ನನ್ನ ಕನ್ನಡಾಭಿಮಾನವನ್ನು  ಬಡೆದೆಬ್ಬಿಸಿ ಹೀಗೆ ನಿದ್ದೆಗೆಟ್ಟು,office ಕೆಲಸ ಬದಿಗಿಟ್ಟು Blog ಬರೆಯುವಂತೆ ಮಾಡಿದೆ ಅನ್ಸತ್ತೆ.

ಸಂತೋಷಾ ಏನು ಅಂದರೆ Blog titleಗಾಗಿ ವಾರಗಟ್ಟಲೆ ಪರದಾಡುವ ನಾನು ಈ ಬಾರಿ ಸರಾಗವಾಗಿ title ಕೊಟ್ಟೆ

" ನೀವೂ ಗಡ್ಡಕ್ಕೆ ಬೆಂಕಿ ಹತ್ತಿದ್ರೆನೇ ಭಾವಿ ತೋಡ್ತಿರಾ ?"

ಹೌದು . ಗಡಕ್ಕೆ ಬೆಂಕಿ ಹತ್ತಿದಾಗ Blog ಬರೆದ ನಾನು ಎಲ್ಲಾ ವಿಷಯಕ್ಕೂ ಹೀಗೆನಾ ಅಂತಾ ನಂಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ.

Engineering ವಿಧ್ಯಾರ್ಥಿಗಳಿಗೆ ಇರುವ ಅಪವಾದ ಇದು: ಪರೀಕ್ಷೆ ನಾಳೆ ಇದ್ರೆ ಮಾತ್ರ ಪುಸ್ತಕದ ಧೂಳು ಝಾಡಿಸಿ ಓದ್ತಾರೆ ಅಂತಾ. ಮುಕ್ತವಾಗಿ ಹೇಳೋದಾದ್ರೆ ಈ ಅಪವಾದದಂತೆ ಕೆಲವೊಮ್ಮೆ ನಡೆದುಕೊಂಡರು ಸಹ , ಶಿಸ್ತಿನಿಂದ ಓದಿ ಪರೀಕ್ಷೆ ಬರೆದಿರುವ ಸನ್ನಿವೇಶಗಳೂ ಇವೆ.

Last momentನಲ್ಲಿ ತಯಾರಾಗಿ Bus miss ಮಾಡಿಕೊಳ್ಳೋ Friendsನ ನೋಡಿದೀನಿ. ಅನುಕರಿಸಲಿಕ್ಕೆ ಹೋಗಿ ಗಡ್ಡ ಅಲ್ಲದಿದ್ದರೂ ಕೈ ಅಂತು ಸುಟ್ಟುಕೊಂದು ಪಜೀತಿ ಅನುಭವಿಸಿದ್ದೇನೆ.

ಹೇಗಾಯ್ತಲ್ಲ ಅಂತ ಪಶ್ಚಾತಾಪ ಪಟ್ಟು , Birthday Party ಗೆ ಸಹ Right timeಗೆ ಹೋಗಕ್ಕೆ ಹೋಗಿ Accident ಮಾಡ್ಕೊಂಡೆ .ಗಡ್ಡ ಸುಟ್ಟುಕೊಳ್ಳೋದು ವಾಸಿ Collar boneನೆ ಮುರ್ಕೊಂಡೆ.

ನಾನಂತೂ ಯಾವ ಯಾವ ಭಾವೀನ ಹ್ಯಾಗ ಹ್ಯಾಗ ತೊಡದೆ ಅಂತ ಬರ್ದಾಯ್ತು. ಯಾವ್ ಯಾವ್ ಭಾವಿ ಎಸ್ಟ್ಎಷ್ಟು ಆತ್ರದಿಂದ ತೊಡಬೇಕು ಅಂತ ಪಾಠ ಕಲ್ತಿದ್ದೂ ಆಯಿತು.

ಈಗ ನೀವ್ ಹೇಳಿ ನಿಮಗೂ ಹೀಗೆಲ್ಲಾ ಆಗಿದ್ಯಾ??


-ಚರಿತಾ

PS: ಹೊಸ Tool ಉಪಯೋಗಿಸಿ ಬರಿತಿದಿನಿ . ತಪ್ಪುಗಳನ್ನು ಸಹಿಸಿಕೊಳ್ಳಲು ವಿನಂತಿ :)

Games People Play - Book Review

Games People Play by Eric Berne. What if every Human Interaction is a Game.  What are the different games people play with us( a...